ಅಕ್ಟೋಬರ್ 28, 2022 ರಂದು 67ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಮ್ಮ ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶನದಂತೆ ಕೋಟಿ ಕಂಠ ಗಾಯನವನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸ್ವಾಗತ ಭಾಷಣವನ್ನು ಶಿಕ್ಷಕಿ ಆಶಾಗೌರಿಯವರು ನೆರವೇರಿಸಿದರು. “ನಮ್ಮ ನಾಡು, ನಮ್ಮ ಹೆಮ್ಮೆ ಎನ್ನುವ ಅಭಿಮಾನ ಪ್ರತಿಯೊಬ್ಬರಲ್ಲಿ ನೆಲೆಗೊಳ್ಳಲಿ” ಎಂದು ತಿಳಿಸುವುದರ ಮುಖಾಂತರ ಪ್ರಾಸ್ತವಿಕ ಭಾಷಣವನ್ನು ಶಿಕ್ಷಕರಾದ ಶ್ರೀಯುತ ಶಿಲಾಸ್ ಇವರು ನೆರವೇರಿಸಿದರು.

ಮಿನ್ಕಾಣ್ಕೆ ನೇರಪ್ರಸಾರ ಕಾರ್ಯಕ್ರಮದಲ್ಲಿ ಶಾಲಾ ಸಮೂಹವು ಒಟ್ಟಾಗಿ ಕಂಠ ಬೆರೆಸುವುದರೊಂದಿಗೆ, ಕೋಟಿ ಕಂಠ ಗಾಯನಕ್ಕೆ ಏಕಧ್ವನಿ ಗೂಡಿಸಲಾಯಿತು. ತದನಂತರ ಭಗಿನಿ ಪ್ರೀನಾರವರು ಸಂಕಲ್ಪ ವಿಧಿಯನ್ನು ಬೋಧಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಭಗಿನಿ ಸಾರಿಕಾ ಹಾಗೂ ಶಿಕ್ಷಕ, ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ನಿರೂಪಣೆಯನ್ನು ಶಿಕ್ಷಕಿ ದೀಪ್ತಿಯವರು ನೆರವೇರಿಸಿದರು.